ಕಳಸ : ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಸನ್ನಿದಿಯಲ್ಲಿ ಶ್ರೀಮನ್ ಮಹಾಚಂಡಿಕಾ ಹೋಮ…

175
firstsuddi

ಕಳಸ : ಹೊರನಾಡು ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿದಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀಮನ್ ಮಹಾಚಂಡಿಕಾ ಹೋಮ ನಡೆಯಿತು.
ಬೆಳಿಗ್ಗೆ 6.30ಕ್ಕೆ ಆರಂಭಗೊಂಡ ದಾರ್ಮಿಕ ವಿಧಿ ವಿದಾನಗಳಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜಾ ವಿದಿ ವಿದಾನಗಳು ನಡೆಯಿತು. ಅಲ್ಲದೆ ಇದೇ ಸಂದರ್ಭದಲ್ಲಿ ಶ್ರೀಮನ್ ಮಹಾಚಂಡಿಕಾ ಹೋಮ ನಡೆಯಿತು. ಮದ್ಯಾಹ್ನ 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿಯು ನಡೆಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮೇಶ್ವರ ಜೋಷಿ ಕೊರೋನ ವೈರಸ್ ಹಾವಳಿಯು ನಿಯಂತ್ರಿಸಲು ದೇವಿ ಅನ್ನಪೂರ್ಣೇಶ್ವರಿ ಮಾತೆಯಲ್ಲಿ ಪ್ರಾರ್ಥನೆ ಮಾಡಲಾಗಿದೆ. ಒಂದೆಡೆ ಆರೋಗ್ಯದ ತೊಂದರೆಯ ಪ್ರಳಯವಾದರೆ ಇನ್ನೊಂದೆಡೆ ಜಲಪ್ರಳಯಗಳು ನಡೆಯುತ್ತಿದೆ. ಇದೆಲ್ಲ ನಿವಾರಣೆಯಾಗಿ ಸುವೃಷ್ಠಿಯಾಗಲಿ.
ಜಂಡಿಕಾ ಹೋಮದ ಪೂರ್ಣಹುತಿಯಲ್ಲಿ ಹೇಗೆ ಯಜ್ಞಕುಂಡಕ್ಕೆ ವಿವಿದ ದ್ರವ್ಯಗಳನ್ನು ಹಾಕಿ ಸಮರ್ಪನೆ ಮಾಡುತ್ತೇವೆಯೋ ಹಾಗೆಯೆ ನಮ್ಮ ಜೀವನದಲ್ಲೂ ಕೂಡ ಕೆಟ್ಟ ಗುಣಗಳನ್ನು ಕೂಡ ನಾವು ನಾಶ ಮಾಡಿಕೊಂಡು ಅಲ್ಲಿ ಉತ್ತಮವಾದ ಜ್ಞಾನ ಸಂಪಾದನೆಯನ್ನು ಸ್ವೀಕರ ಮಾಡಿಕೊಂಡು ಒಳ್ಳೆಯ ಅರಿವು ಮತ್ತು ಆರೋಗ್ಯವನ್ನು ಸಂಪಾದಿಸುವ ಮುಖಾಂತರ ನಮ್ಮ ಜೀವನ ಸಾರ್ಥಕವಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ಥಳಿಯರು ಸೇರಿದಂತೆ ರಾಜ್ಯ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಅ 29ರಂದು ಡಾ|ಜಿ.ಭೀಮೇಶ್ವರ ಜೋಷಿಯವರ ಪಟ್ಟಾಭಿಷೇಕೋತ್ಸವ ಜೀವ_ಭಾವ ಕಾರ್ಯಕ್ರಮದ ಅಂಗವಾಗಿ ದೇವಿಗೆ ಅಭಿಷೇಕ, ಪೂಜೆ ಮತ್ತು ನವಗ್ರಹ ಹೋಮ.ಮತ್ತು ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಶಿವಮೊಗ್ಗ ಇವರಿಗೆ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸರಳವಾಗಿ ನಡೆಯಲಿದೆ.