ಸೇನಾಧಿಕಾರಿಗಳ ಹೆಸರು ಹೇಳಿ ವಂಚನೆ ಮಾಡುತ್ತಿದ್ದ ನಾಲ್ವರ ಬಂಧನ…

126
firstsuddi

ಬೆಂಗಳೂರು : ಸೇನಾಧಿಕಾರಿಗಳ ಹೆಸರು ಹೇಳಿಕೊಂಡು OLX ನಲ್ಲಿ ವಂಚನೆ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನ ಮೂಲದ ಸಹಿಲ್, ಉಮರ್ ಖಾನ್, ವಜೀಬ್ ಹಾಗೂ ಸೈದ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು OLX ನಲ್ಲಿ ಕಡಿಮೆ ಬೆಲೆಗೆ ವಾಹನ ಮಾರಾಟ ಮಾಡುವುದಾಗಿ ಫೋಟೋವನ್ನು ಹಾಕುತ್ತಿದ್ದರು. ಬಳಿಕ ಅದನ್ನು ಗಮನಿಸಿ ವಾಹನ ಖರೀದಿಸಲು ಯಾರಾದರು ಕರೆ ಮಾಡಿದರೆ ನಾವು ಸೇನೆಯಲ್ಲಿ ಸೆವೆ ಸಲ್ಲಿಸುತ್ತಿರುವುದಾಗಿ ಹೇಳಿ ವಂಚಿಸುತ್ತಿದ್ದರು. ಪೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಹಣ ತಮ್ಮ ಖಾತೆಗೆ ಹಾಕಿಸಿಕೊಂಡು ಬಳಿಕ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡು ವಂಚಿಸುತ್ತಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಒಟ್ಟು 20 OLX ನಲ್ಲಿ ವಂಚನೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.