ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ-ವೈದ್ಯರಿಗೆ ಗಾಯ…

133
firstsuddi

ಉಡುಪಿ: ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ವೈದ್ಯರೊಬ್ಬರು ಗಾಯಗೊಂಡಿರುವ ಘಟನೆ ಹಿರಿಯಡ್ಕ ಸಮೀಪದ ಗಂಪಾ ಕ್ರಾಸ್ ಬಳಿ ನಡೆದಿದೆ. ಹಿರಿಯಡ್ಕ ಸಮೀಪದ ಗಂಪಾ ಕ್ರಾಸ್ ಬಳಿ ಕಾರು ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕೆ. ಎಂ ಸಿಯ ವ್ಯೆದ್ಯರಾದ ಡಾ| ವಿಜಯ ಕುಮಾರ್ ಅವರು ಗಾಯಗೊಂಡಿದ್ದಾರೆ. ಘಟನೆಯ ರಭಸಕ್ಕೆ ಕಾರಿನ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.