ಕೊಟ್ಟಿಗೆಹಾರ : ಕನ್ನಡ ಭಾಷೆಯ ಉಳಿವಿಗೆ ಎಲ್ಲರೂ ಕಂಕಣಬದ್ದರಾಗುವ ಅಗತ್ಯವಿದ್ದು ಕನ್ನಡ ನಾಡುನುಡಿಯ ಏಳಿಗೆಗೆ ಪಣತೊಡೋಣ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಳಸ ಅಧ್ಯಕ್ಷರಾದ ಶಾಮಾಚಾರ್ಯ ಹೇಳಿದರು.
ಸುಂಕಸಾಲೆಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆಧ್ಯತೆ ಸಿಗಬೇಕಿದೆ. ಬ್ಯಾಂಕ್, ಸರ್ಕಾರಿ ಕಚೇರಿ, ಎಟಿಎಂ ಮುಂತಾದ ಕಡೆಗಳಲ್ಲಿ ಕನ್ನಡ ಬಳಕೆಯ ಸಾಧ್ಯತೆಗಳನ್ನು ಹುಡುಕಿ ಕನ್ನಡವನ್ನು ಜಾರಿಗೆ ತರಬೇಕಿದೆ ಎಂದರು.
ಗ್ರಾ.ಪಂ ಮಾಜಿ ಸದಸ್ಯ ಸುಬ್ಬರಾಯಗೌಡ ಮಾತನಾಡಿ ಕನ್ನಡ ಭಾಷೆಯ ಸವಿ, ಕನ್ನಡ ಸಾಹಿತ್ಯದ ಸಮೃದ್ದತೆ ಹಾಗೂ ಭವ್ಯ ಇತಿಹಾಸವನ್ನು ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಆ ನಿಟ್ಟಿನಲ್ಲಿ ಪೋಷಕರು ಕಾರ್ಯಪ್ರವೃತರಾಗಬೇಕಿದೆ ಎಂದರು.
ಗ್ರಾಮದ ಹಿರಿಯರಾದ ಈಶ್ವರಗೌಡ, ಶಂಕರೇಗೌಡ, ಎಐವೈಎಫ್‍ನ ರವಿ ಸುಂಕಸಾಲೆ ಮಾತನಾಡಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಪೂವಪ್ಪ, ಶ್ರೀಮೂರ್ತಿ, ಶಿಕ್ಷಕ ಕಾಂತರಾಜ್ ಎಚ್.ಸಿ, ಗ್ರಾಮಸ್ಥರಾದ ಸುಧಾಕರ್, ಸಂದೀಪ್, ರಘು, ಆಟೋ ಸಂಘದ ಪಧಾಧಿಕಾರಿಗಳಾದ ಗಣೇಶ್, ಕೃಷ್ಣ, ಸತ್ಯೇಂದ್ರ, ನಜೀರ್, ಪ್ರಶಾಂತ್, ಉಮೇಶ್, ದಿವಾಕರ್ ಮುಂತಾದವರು ಇದ್ದರು.










