ಕೊರೊನಾ ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ-ಪ್ರಧಾನಿ ಮೋದಿ ಸೂಚನೆ…

140
firstsuddi

ನವದೆಹಲಿ : ಕೊರೊನಾ ಲಸಿಕೆ ಬರುವವರೆಗೂ ಕೊರೊನಾ ಕುರಿತು ನಿರ್ಲಕ್ಷ್ಯ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಕಂಡಿದ್ದು, ಈ ಹಿನ್ನೆಲೆ, ಇಂದು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಅವರು, ಕೊರೊನಾ ಸೋಂಕಿನ ಕುರಿತು ಎಂದಿಗೂ ನಿರ್ಲಕ್ಷ ಬೇಡ. ತ್ವರಿತವಾಗಿ ಲಸಿಕೆ ಸಿದ್ಧಪಡಿಸುವುದಷ್ಟೇ ಅಲ್ಲ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂದು ಖಚಿತವಾದ ಬಳಿಕವೇ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ. ಭಾರತ ಪ್ಯಾಡೆಮಿಕ್ ಅನ್ನು ಎದುರಿಸಲು ಸಮರ್ಥವಾಗಿ ಎದುರಿಸುತ್ತಿದೆ. ಎಲ್ಲಾ ರಾಜ್ಯ ಸರ್ಕಾರಗಳು ಕೊರೊನಾ ಲಸಿಕೆ ಸಂಗ್ರಹಾಲಯಗಳನ್ನು ಅಭಿವೃದ್ಧಿಪಡಿಸಬೇಕು. ಲಸಿಕೆ ಬಂದ ಕೂಡಲೇ ವಿತರಿಸಲು ಎಲ್ಲರೂ ಸರ್ವ ಸನ್ನದ್ಧರಾಗಿರಬೇಕು ಎಂದು ಪ್ರಧಾನಿ ಮೋದಿ ಅವರು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.