ಮೂಡಿಗೆರೆ : ಬೆಳಗೋಡು ಗ್ರಾಮದ ಗದ್ದೆ ಬದಿಯ ಚರಂಡಿಯಲ್ಲಿ ಗೋವಿನ ರುಂಡ ಪತ್ತೆ…

472
firstsuddi

ಕೊಟ್ಟಿಗೆಹಾರ ; ಬೆಳಗೋಡು ಗ್ರಾಮದ ಗದ್ದೆ ಬದಿಯ ಚರಂಡಿಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು, ದುಷ್ಕರ್ಮಿಗಳು ಗೋಹತ್ಯೆ ಮಾಡಿ ಮಾಂಸವನ್ನು ತೆಗೆದುಕೊಂಡು ರುಂಡವನ್ನು ಎಸೆದು ಹೋಗಿದ್ದಾರೆ.
ಬಣಕಲ್ ಬಜರಂಗದಳದ ಸಂಚಾಲಕ ಅಭಿಷೇಕ್ ಕಾರ್ಯ ನಿಮಿತ ಬೆಳಗೋಡು ಗ್ರಾಮಕ್ಕೆ ಹೋದ ಸಂದರ್ಭದಲ್ಲಿ ಗದ್ದೆ ಬದಿಯ ಚರಂಡಿಯಲ್ಲಿ ಗೋವಿನ ರುಂಡ ಇರುವುದನ್ನು ಗಮನಿಸಿದ್ದು, ಕೂಡಲೆ ಬಣಕಲ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಣಕಲ್ ಠಾಣಾ ಪಿಎಸ್‍ಐ ಶ್ರೀನಾಥ್ ರೆಡ್ಡಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದು, ಗೋಹತ್ಯೆ ಮಾಡಿದವರ ಪತ್ತೆ ತನಿಖೆ ಆರಂಭಿಸಿದ್ದಾರೆ.