ಕೃಷ್ಣ ನದಿಯಲ್ಲಿ ನೀರು ಕುಡಿಯಲು ತೆರೆಳಿದ್ದ ಬಾಲಕ ಮೊಸಳೆ ದಾಳಿಗೆ ಬಲಿ…

150
firstsuddi

ರಾಯಚೂರು : ಕೃಷ್ಣ ನದಿಯಲ್ಲಿ ನೀರು ಕುಡಿಯಲು ತೆರೆಳಿದ್ದ ಬಾಲಕ ಮೊಸಳೆ ದಾಳಿಗೆ ಬಲಿಯಾಗಿರುವ ಘಟನೆ ತಾಲೂಕಿನ ಡೊಂಗಾಪುರದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೃತ ಬಾಲಕ ಎಂದು ಗುರುತಿಸಲಾಗಿದೆ. ಕೊರೊನಾ ಸೋಂಕಿನ ಭೀತಿಯಿಂದ ಶಾಲೆಗೆ ರಜೆ ಇರುವ ಕಾರಣ ಬಾಲಕ ತನ್ನ ಗೆಳೆಯರೊಂದಿಗೆ ದನ ಕಾಯಲು ತೆರಳಿದ್ದು, ಬಳಿಕ ಬಾಲಕ ನೀರು ಕುಡಿಯಲು ಕೃಷ್ಣ ನದಿ ಬಳಿ ತೆರಳಿದ್ದ ವೇಳೆ ನದಿಯಲ್ಲಿ ಅಡಗಿದ್ದ ಮೊಸಳೆ ಬಾಲಕನ ಮೇಲೆ ದಾಳಿ ನಡೆಸಿ ಬಾಲಕನನ್ನು ನೀರಿನೊಳಗೆ ಎಳೆದುಕೊಂಡು ಹೋಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬಾಲಕನ ಮೃತದೇಹಕ್ಕಾಗಿ ಕಾರ್ಯಚರಣೆ ಆರಂಭಿಸಿದ್ದು, ಇಂದು ಬೆಳಿಗ್ಗೆ ಮೃತ ಬಾಲಕನ ತಲೆಯ ಭಾಗ ಮಾತ್ರ ಪತ್ತೆಯಾಗಿದ್ದು, ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.