ಕೊಟ್ಟಿಗೆಹಾರ : ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಪೋಟೋಗ್ರಫಿ ಸೊಸೈಟಿಯ ವತಿಯಿಂದ ಪೋಟೋಗ್ರಫಿ ಕಾರ್ಯಾಗಾರ……

250
firstsuddi

ಕೊಟ್ಟಿಗೆಹಾರ : ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪೋಟೋಗ್ರಫಿ ಸೊಸೈಟಿಯ ವತಿಯಿಂದ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಫೋಟೋಗ್ರಫಿ ಕಾರ್ಯಾಗಾರ ನಡೆಯಲಿದೆ.
ಡಿಸೆಂಬರ್ 12 ರ ಶನಿವಾರ ಹಾಗೂ 13 ರ ಭಾನುವಾರ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪೋಟೋಗ್ರಫಿ ಸೊಸೈಟಿಯ ಸದಸ್ಯರಿಗೆ ಫೋಟೋಗ್ರಫಿ ಕಾರ್ಯಾಗಾರ ನಡೆಯಲಿದ್ದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕಾರ್ಯಾಗಾರ ಪ್ರಾರಂಭವಾಗಲಿದ್ದು, ಖ್ಯಾತ ಚಿತ್ರಕಲಾವಿದರಾದ ಸುರೇಶ್ಚಂದ್ರ ದತ್ತ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಛಾಯಾಗ್ರಾಹಕರಾದ ಡಾ.ಕೃಷ್ಣಮೋಹನ್ ಭಾಗವಹಿಸಲಿದ್ದಾರೆ. ಭಾನುವಾರ ಬೆಳಿಗ್ಗೆ 12 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.