ಹಾಸನ : ಸ್ಕೂಟರ್ ಹಾಗೂ ಓಮ್ನಿ ಕಾರು ನಡುವೆ ಡಿಕ್ಕಿ-4 ವರ್ಷದ ಮಗು ಸ್ಥಳದಲ್ಲೇ ಸಾವು…

164
firstsuddi

ಹಾಸನ : ಸ್ಕೂಟರ್ ಹಾಗೂ ಓಮ್ನಿ ಕಾರು ನಡುವೆ ಡಿಕ್ಕಿ ಸಂಭವಿಸಿ ನಾಲ್ಕು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಮೃತ ಮಗುವನ್ನು ಯೋಗೇಶ್(04) ಎಂದು ಗುರುತಿಸಲಾಗಿದೆ. ಮೃತ ಮಗು ತನ್ನ ತಂದೆ ತಾಯಿಯೊಂದಿಗೆ ಸ್ಕೂಟರ್‍ನಲ್ಲಿ ತೆರಳುತ್ತಿದ್ದ ವೇಳೆ ಅರಸೀಕೆರೆಯ ಎಪಿಎಂಸಿ ಮಾರುಕಟ್ಟೆ ಬಳಿ ಸ್ಕೂಟರ್ ಗೆ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ತನ್ನ ತಂದೆ ತಾಯಿಯ ಕಣ್ಣೆದುರಲ್ಲೇ ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಯಲ್ಲಿ ತಂದೆ ಹಾಗೂ ತಾಯಿಗೂ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅರಸೀಕೆರೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.