ಕೊಡಗು: ಮಾಂಸಕ್ಕಾಗಿ ಕೋಳಿ ವ್ಯಾಪಾರ ಮಾಡಿ ನಿಲ್ಲಿಸಿದ್ದ ವ್ಯಾಪಾರಿಯ ಪಿಕಪ್ ವಾಹನವನ್ನೇ ಕಳ್ಳತನ ನಡೆಸಿ ನಕಲಿ ನಂಬರ್ ಪ್ಲೇಟ್ ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಣ್ಣೂರಿನ ರೌಫ್,ಕರಿಕೆಯ ಅಬ್ದುಲ್ ಫಾರೂಕ್,ಸುಳ್ಯದ ಡೇವಿಡ್ ಎಂದು ಗುರುತಿಸಲಾಗಿದೆ
ಕಳೆದ ಮೂರು ತಿಂಗಳ ಹಿಂದೆ ಕೋಳಿ ವ್ಯಾಪಾರ ಮುಗಿಸಿ ನಿಲ್ಲಿಸಿದ್ದ ವಾಹನ ಕಳುವಾಗಿದ್ದು, ಸಂಬಂಧ ಕುಶಾಲನಗರದಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕೆಲವೊಂದು ದಾಖಲೆ ಮೂಲಕ ಎಲ್ಲಾ ಪೋಲಿಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು.
ದಕ್ಷಿಣ ಕನ್ನಡ ಸುಳ್ಯದಲ್ಲಿ ಪಿಕ್ ಅಪ್ ವಾಹನವೊಂದರ ಮಾರಾಟಕ್ಕೆ ವ್ಯಕ್ತಿ ಯತ್ನ ನಡೆಸುತ್ತಿರುವುದರ ಬಗ್ಗೆ ಮಾಹಿತಿ ಸಿಕ್ಕಿ ವಿಚಾರಿಸಿದ ವೇಳೆ ಅದೇ ವಾಹನ ಕುಶಾಲನಗರದಲ್ಲಿ ಇರುವುದು ತಿಳಿದು ವಾಹನ ಪತ್ತೆ ಹಚ್ಚಿ, ಕಣ್ಣೂರಿನ ರೌಫ್, ಕರಿಕೆಯ ಅಬ್ದುಲ್ ಫಾರೂಕ್, ಸುಳ್ಯದ ಡೇವಿಡ್ ರನ್ನು ಬಂದಿಸಿ ವಾಹನ ವಶಕ್ಕೆ ಪಡೆಯಲಾಗಿದೆ.










