ನೀರು ಕಾಯಿಸುವ ವಿದ್ಯುತ್ ಕಾಯಿಲ್ ಸ್ಪರ್ಷಿಸಿ ಗರ್ಭಿಣಿ ಸಾವು…

162
firstsuddi

ದಾವಣಗೆರೆ : ನೀರು ಕಾಯಿಸುವ ವಿದ್ಯುತ್ ಕಾಯಿಲ್ ತಗುಲಿ ಗರ್ಭಿಣಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹನುಮಂತಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ನೇತ್ರಾವತಿ ಬಸವರಾಜ್(23) ಮೃತ ಗರ್ಭಿಣಿ ಎಂದು ಗುರುತಿಸಲಾಗಿದೆ. ನೇತ್ರಾವತಿ ಅವರು ಸ್ನಾನಕ್ಕೆ ನೀರು ಕಾಯಿಸಲು ವಿದ್ಯುತ್ ಕಾಯಿಲ್ ಹಾಕಿದ್ದರು. ಈ ವೇಳೆ ನೇತ್ರಾವತಿ ಅವರಿಗೆ ವಿದ್ಯುತ್ ಸ್ಪರ್ಷಿಸಿದ್ದು, ಪರಿಣಾಮ ನೇತ್ರಾವತಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಗಳುರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.