ಮೂಡಿಗೆರೆ :ಚಾರ್ಮಾಡಿ ಅರಣ್ಯದಲ್ಲಿ ಕಾಡ್ಗಿಚ್ಚು…

246

ಕೊಟ್ಟಿಗೆಹಾರ:ಚಾರ್ಮಾಡಿ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಬೆಂಕಿ ರೇಖೆ ಮಾಡಿಸದೇ ಇರುವುದೇ ಬೆಂಕಿ ಹರಡಲು ಕಾರಣ ಎನ್ನಲಾಗಿದೆ.

ಚಾರ್ಮಾಡಿಯ ಸೋಮನಕಾಡಿನಿಂದ ಒಂದು ಕಿ.ಮಿ ದೂರದ ಪ್ರಫಾತದಲ್ಲಿ ಬೆಂಕಿ ಹೊತ್ತುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯಾದಿಕಾರಿಗಳು ಕೂಡಲೇ ಮೂಡಿಗೆರೆ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ್ದಾರೆ.
ಬೆಂಕಿರೇಖೆ ನಿರ್ಮಿಸಿದ್ದರೆ ಬೆಂಕಿ ಹಬ್ಬುವುದು ಕಡಿಮೆಯಾಗುತ್ತದೆ. ಈ ಸಲ ಬೆಂಕಿ ರೇಖೆ ನಿರ್ಮಿಸದೇ ಇರುವುದರಿಂದ ಬೆಂಕಿ ಎಲ್ಲೆಡೆ ವ್ಯಾಪ್ತಿಸುವುದು ಹೆಚ್ಚಿದ್ದು ಬೆಂಕಿರೇಖೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್,ಕಿಡಿಗೇಡಿಗಳು ಪಟಾಕಿ ಸಿಡಿಸಿರುವುದದಿಂದ ಕಾಡಿಗೆ ಬೆಂಕಿ ಹಬ್ಬಿದೆ. ಸ್ಥಳದಲ್ಲಿ ಪಟಾಕಿಯ ಚೂರುಗಳು ದೊರೆತ್ತಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿ ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬೆಂಕಿ ನಂದಿಸುವ ಕಾರ್ಯದಲ್ಲಿ ವಲಯ ಅರಣ್ಯಾದಿಕಾರಿ ಬಿ.ಜಿ.ಮೋಹನ್ ಕುಮಾರ್, ಅಮರಾಕ್ಷ, ಶಿವರಾಜ್, ಅರಣ್ಯ ರಕ್ಷಕರಾದ ಸುರೇಶ್, ನಾಗರಾಜ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.