ಕೆಲವು ಪಕ್ಷಗಳಿಗೆ ದೇಶದ ಲಸಿಕೆ ಬಗ್ಗೆ ನಂಬಿಕೆ ಇಲ್ಲ, ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ನಂಬಿಕೆ – ಸಿ ಟಿ ರವಿ.

101
firstsuddi

ಉಡುಪಿ: ಕೆಲವು ಪಕ್ಷಗಳಿಗೆ ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ ಬದಲಾಗಿ ಇಟೆಲಿ ಚೀನಾದಿಂದ ಬಂದರೆ ಮಾತ್ರ ಹೆಚ್ಚು ನಂಬಿಕೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ. ಜನಸೇವಕ ಸಮಾವೇಶದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಬಗ್ಗೆ ಕೆಲವೊಂದು ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿರುವುದು ದುರ್ದೈವವಾಗಿದ್ದು, ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದು ಷಡ್ಯಂತ್ರವಾಗಿದೆ. ಕೆಲವೊಂದು ಪಕ್ಷದವರು ತಾವು ಮಾಡೋದಿಲ್ಲ ಮಾಡುವವರಿಗೆ ಬಿಡುವುದಿಲ್ಲ ಅವರು ಅಂತಹ ಮನಸ್ಥಿತಿ ಬದಲಾಯಿಸಿಕೊಳ್ಳಬೇಕಾಗಿದೆ. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದರು.

ಅವರಿಗೆ ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಒಳ್ಳೆದು ಅಂತಾರೆ ಆದರೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕೆಲವೊಂದು ಪಕ್ಷಗಳಿಗೆ ಈ ದೇಶದ ಜನರ ಓಟು ಬೇಕು ಆದರೆ ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಅಲ್ಲದೆ ಅವರಿಗೆ ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ನನಗಿರೋ ಮಾಹಿತಿ ಪ್ರಕಾರ ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಆದರೆ ಅದನ್ನು ಅಧಿಕೃತವಾಗಿ ಮುಖ್ಯಮಂತ್ರಿಗಳು ಇನ್ನಷ್ಟೇ ಹೇಳಬೇಕು. ಯೋಗ್ಯತೆ ಇರುವವರು ನಮ್ಮ ಪಕ್ಷದಲ್ಲಿ ಬಹಳ ಜನ ಇದ್ದಾರೆ ಆದರೆ ಮಂತ್ರಿಯಾಗುವ ಯೋಗ ಯಾರಿಗಿದೆ ನಾಳೆ ನೋಡೋಣ ಎಂದರು.