ಬೆಂಗಳೂರು: 2020-21ನೇ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆ ಜೂನ್ 14 ರಿಂದ ಆರಂಭ

207

ಬೆಂಗಳೂರು: 2020-21ನೇ ಸಾಲಿನ ಎಸ್‌ಎಸ್ ಎಲ್ ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಘೋಷಣೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜೂನ್ 14ರಿಂದ ಎಸ್‌ಎಸ್‌ಎಲ್ ಸಿ ಪರೀಕ್ಷೆ ಆರಂಭವಾಗಲಿದೆ ಎಂದರು. ಜೂ.14ರಿಂದ ಜೂ.25ರವರೆಗೆ ಪರೀಕ್ಷೆಗಳು ನಡೆಯಲಿದೆ.

ಜೂನ್ 14ರಂದು ಪ್ರಥಮ ಭಾಷೆ, ಜೂ.16 ಗಣಿತ, ಸಮಾಜ ಶಾಸ್ತ್ರ, ಜೂ.18 ದ್ವಿತೀಯ ಭಾಷೆ, ಜೂ. 21 ವಿಜ್ಞಾನ, ಜೂ.23 ತೃತೀಯ ಭಾಷೆ, ಜೂ.25 ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿದೆ.

ಈ ಬಾರಿ ಮೂರು ಗಂಟೆ 15 ನಿಮಿಷಗಳ ಕಾಲ ಪರೀಕ್ಷೆಗಳು ನಡೆಯಲಿದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ, ಪೋಷಕರಿಗೆ ಆಕ್ಷೇಪಗಳಿದ್ದರೇ 15 ದಿನಗಳ ಕಾಲಾವಕಾಶದಲ್ಲಿ ತಿಳಿಸಬಹುದು ಎಂದು ಸಚಿವರು ಹೇಳಿದರು.