ಮೂಡಿಗೆರೆ : ಬಸ್ಸ್ ನಲ್ಲಿ ಪ್ರಯಾಣಿಸುವಾಗಲೇ ವ್ಯಕ್ತಿ ಅಸ್ವಸ್ಥ…

281
First Suddi

ಕೊಟ್ಟಿಗೆಹಾರ : ಸರ್ಕಾರಿ ಬಸ್ಸಿನಲ್ಲಿ ಮಂಗಳೂರಿನಿಂದ ಹಾಂದಿ ಹೊಸಪೇಟೆಗೆ ಸಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡ ಘಟನೆ ಶುಕ್ರವಾರ ನಡೆದಿದೆ.
ಹಾಂದಿ ಸಮೀಪದ ಹೊಸಪೇಟೆಯ ರಾಜೇಶ್ ಎಂಬುವವರು ಮಂಗಳೂರಿನಿಂದ ಹಾಂದಿ ಹೊಸಪೇಟೆಗೆ ಸರ್ಕಾರಿ ಬಸ್ಸಿನಲ್ಲಿ ಸಾಗುತ್ತಿದ್ದ ವೇಳೆ ಚಾರ್ಮಾಡಿ ಘಾಟ್‍ನ ಆಲೇಕಾನ್ ಸಮೀಪ ಎದೆನೋವು ಕಾಣಿಸಿಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಬಣಕಲ್‍ನ ಅಂಬುಲೆನ್ಸ್ ಚಾಲಕ ಆರೀಫ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಆರೀಫ್ ಕೃತಕ ಉಸಿರಾಟ ನೀಡಿ ಅಂಬುಲೆನ್ಸ್‍ನಲ್ಲಿ ಕೂಡಲೇ ರಾಜೇಶ್ ಅವರನ್ನು ಕೂಡಲೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ.