ವಿಜಯಪುರ : ಸಾಲಬಾಧೆ ತಾಳಲಾರದೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲಮೇಲ ತಾಲ್ಲೂಕಿನ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿ ನಡೆದಿದೆ.
ಪುಂಡಲಿಂಗ ಜೀರಟಗಿ (22) ಆತ್ಮಹತ್ಯೆಗೆ ಶರಣಾದ ಯುವ ರೈತ. ತನ್ನ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾದ ಕಾರಣ, ಜಮೀನಿನ ಲೀಸ್ ಹಣ ಕೊಡಲಾಗದೇ ಹಾಗೂ ಖಾಸಗಿಯಾಗಿ ಮಾಡಿದ ಸಾಲ ಮರು ಪಾವತಿ ಮಾಡಲಾಗದೇ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂದು ತಿಳಿದುಬಂದಿದೆ. ಅಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










