ಫಸ್ಟ್ ಸುದ್ದಿ : ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗಬೇಕೆಂದ್ರೆ ಈ ಆಹಾರಗಳನ್ನ ಸೇವಿಸಿ. ಈ ಆಹಾರಕ್ಕಾಗಿ ಸಾಕಷ್ಟು ಹಣ ವ್ಯಹಿಸಬೇಕಿಲ್ಲ. ಹುಡುಕಾಡಬೇಕೂ ಇಲ್ಲ. ಸುಲಭವಾಗಿ ಸಿಗೋ ಇವುಗಳನ್ನ ನಿರಂತರವಾಗಿ ಸೇವಿಸೋದ್ರಿಂದ ವೀರ್ಯಾಣು ಸಂಖ್ಯೆ ಸಾಕಷ್ಟು ಹೆಚ್ಚುತ್ತದೆ. ಇದರಿಂದ ಸಂಗಾತಿಯ ಜೊತೆಗೆ ಉತ್ತಮ ಹಾಗೂ ಆರೋಗ್ಯಯುತವಾದ ಲೈಂಗಿಕ ಕ್ರಿಯೆ ನಡೆಸೋದ್ರ ಜೊತೆ ಸಮೃದ್ಧ ಜೀವನ ನಿಮ್ಮದಾಗಲಿದೆ.
ಬಾಳೆಹಣ್ಣು : ಬ್ರೋಮೇಲೈನ್. ಬಾಳೆಹಣ್ಣಿನಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ. ಇದು ವೀರ್ಯಾಣುಗಳ ಸಂಖ್ಯೆಯನ್ನ ಹೆಚ್ಚಿಸಲು ಸಹಕಾರಿಯಾಗಿದೆ.
ಡಾರ್ಕ್ ಚಾಕಲೇಟ್ : ಚಾಕಲೇಟಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಆಶ್ಚರ್ಯಕ್ಕೊಳಗಾಗಬೇಡಿ. ಇದು ಸತ್ಯ. ಡಾರ್ಕ್ ಚಾಕಲೇಟ್ ಗಳು ಎಂಡೋರ್ಪಿನ್ಸ್ ನ್ನ ಹೆಚ್ಚಾಗಿ ಬಿಡುಗಡೆ ಮಾಡೋದ್ರಿಂದ ವೀರ್ಯಾಣುಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತದೆ.
ದಾಳಿಂಬೆ : ದಾಳಿಂಬೆ ಹಣ್ಣಿನಲ್ಲಿರೋ ಆ್ಯಂಟಿಯಾಕ್ಸಿಡೆಂಟ್ ಗಳು ವೀರ್ಯಾಣುಗಳ ಸಂಖ್ಯೆಯನ್ನ ಕಡಿಮೆ ಮಾಡೋ ಅಂಶಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಿ, ವೀರ್ಯಾಣುಗಳ ಸಂಖ್ಯೆಯನ್ನ ಹೆಚ್ಚಿಸುತ್ತದೆ.
ವಾಲ್ನಟ್ಸ್ : ಒಮೆಗಾ-3 ಅಧಿಕವಾಗಿರುವಂತಹಾ ವಾಲ್ನಟ್ಸ್ ವೀರ್ಯಾಣುಗಳ ಸಂಖ್ಯೆಯನ್ನ ವೃದ್ಧಿಸಲು ಸಹಾಯಕವಾಗುತ್ತದೆ.
ಟೊಮ್ಯಾಟೋ : ದಿನನಿತ್ಯದ ಊಟ-ತಿಂಡಿಯಲ್ಲಿ ಟೊಮ್ಯಾಟೋವನ್ನ ಹೆಚ್ಚಾಗಿ ತೆಗೆದಿಡಬೇಡಿ. ಟೋಮ್ಯಾಟೊವನ್ನ ನಿರಂತರವಾಗಿ ಸೇವಿಸಿದಷ್ಟು ಲೈಂಗಿಕ ಆರೋಗ್ಯ ಕೂಡ ಅಷ್ಟೇ ಉತ್ತಮವಾಗಿರುತ್ತದೆ.










