ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವನ್ನು ಸಾಧಿಸಿದೆ.
ಮೊದಲ ಟೆಸ್ಟ್ ನಲ್ಲೇ ಹೀನಾಯ ಸೋಲು ಅನುಭವಿಸಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್ ನಲ್ಲಿ 317 ರನ್ ಗಳ ಅಂತರಿಂದ ಭರ್ಜರಿ ಜಯ ಗಳಿಸಿದ್ದು, ಈ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ 1-1 ಸಮಬಲ ಕಾಯ್ದುಕೊಂಡಿದೆ. ಭಾರತ ನೀಡಿದ್ದ 482 ರನ್ ಬೃಹತ್ ಮೊತ್ತ ಬೆನ್ನು ಹತ್ತಿದ್ದ ಆಂಗ್ಲರು ಕೇವಲ 164 ರನ್ ಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿದೆ.










