ಮಾಜಿ ಸಚಿವರ ವೀಡಿಯೋ ಪ್ರಕರಣದ ಹಿಂದೆ ಕನಕಪುರ ಹಾಗೂ ಬೆಳಗಾವಿ ಕಡೆಯವರಿದ್ದಾರೆ : ಸಿ.ಪಿ ಯೋಗೇಶ್ವರ್.

134
Firstsuddi

ಬೆಂಗಳೂರು : ಮಾಜಿ ಸಚಿವರ ವೀಡಿಯೋ ಪ್ರಕರಣದ ಹಿಂದೆ ಕನಕಪುರ ಹಾಗೂ ಬೆಳಗಾವಿ ಕಡೆಯವರಿದ್ದಾರೆ ಇದಕ್ಕೆ ಅವರೇ ಕಾರಣ ಎಂದು ಅರಣ್ಯ ಸಚಿವ ಸಿ.ಪಿ ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅನಾವಶ್ಯಕವಾಗಿ ಸಂಬಂಧವಿಲ್ಲದ ಪ್ರಶ್ನೆ ಕೇಳಿ ಮುಜುಗರಕ್ಕೀಡು ಮಾಡಬೇಡಿ. ಇದು ಸಾಮೂಹಿಕ ವಿಚಾರವಲ್ಲ, ವೈಯಕ್ತಿಕ ವಿಚಾರ. ಅವರನ್ನೇ ಕೇಳಬೇಕು. ಇದು ರಾಜಕೀಯ ಷಡ್ಯಂತ್ರವಾಗಿದೆ. ಮುಂದಿನ ದಿನಗಳಲ್ಲಿ ಅವರು ಅದಕ್ಕೆ ತಕ್ಕ ಪ್ರತಿಫಲ ಅನುಭವಿಸುತ್ತಾರೆ. ರಮೇಶ್ ಜಾರಕಿಹೊಳಿ ಅವರ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ ಎಂದರು.