ಆರ್ಥಿಕ ಸಮಸ್ಯೆ ಹಾಗೂ ವೇತನ ಹೆಚ್ಚಳ ಮಾಡದಿದ್ದಕ್ಕೆ ಕಂಪನಿಯಲ್ಲೇ ನೇಣಿಗೆ ಶರಣಾದ ಉದ್ಯೋಗಿ…

170
Firstsuddi

ಬೆಂಗಳೂರು : ಆರ್ಥಿಕ ಸಮಸ್ಯೆ ಹಾಗೂ ಸಂಬಳ ಹೆಚ್ಚಾಗದ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಚಿಕ್ಕಜಾಲ ಬಳಿ ಇರುವ ಎಂವಿ ಸೋಲಾರ್ ಕಂಪನಿಯಲ್ಲಿ ನಡೆದಿದೆ.

ಶಾಂತಕುಮಾರ್ ನೇಣಿಗೆ ಶರಣಾದ ಉದ್ಯೋಗಿ. ಈತ ಚಿಕ್ಕಜಾಲದ ಎಂವಿ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯಲ್ಲಿ ಯಾರು ಇಲ್ಲದೇ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಯುವ ಮುನ್ನ ಶಾಂತಕುಮಾರ್ ಅವರು ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಆರ್ಥಿಕ ಸಮಸ್ಯೆ ಹಾಗೂ ವೇತನ ಹೆಚ್ಚಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಮೂಲತಃ ಹಿರಿಯೂರಿನವರಾದ ಶಾಂತಕುಮಾರ್ ಅವರು ಹಲವು ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಂಬಳ ಹೆಚ್ಚಳ ಆಗಿರಲಿಲ್ಲ. ಈ ಹಿನ್ನಲೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.