ಬೆಳಗಾವಿ : ಕನ್ನಡ ಅಕ್ಷರಗಳಿಗೆ ಮಸಿ ಬಳಿದು ಪುಂಡಾಟ ಮೆರೆದ ಶಿವಸೇನೆ…

129
Firstsuddi

ಬೆಳಗಾವಿ : ಶಿವಸೇನೆ ಪುಂಡಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಮತ್ತೆ ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಳಿಗೆಗಳ ಮೇಲಿದ್ದ ಕನ್ನಡದ ಅಕ್ಷರಗಳಿಗೆ ಕಪ್ಪು ಮಸಿ ಬಳಿದು ದರ್ಪ ತೋರಿದ್ದಾರೆ.

ಕೊಲ್ಲಾಪೂರದ ಪ್ರಸಿದ್ಧ ಮಹಾಲಕ್ಷ್ಮೀ ಯಾತ್ರಿ ನಿವಾಸದ ಕಟ್ಟಡ ಮೇಲಿದ್ದ ಕನ್ನಡ ಅಕ್ಷರಗಳಿಗೆ ಕಪ್ಪು ಮಸಿ ಬಳಿದಿದ್ದು, ಕನ್ನಡ ಬೋರ್ಡ್ ಹಾಕಿದ್ರೆ ವ್ಯಾಪಾರ ಮಾಡಲು ಬಿಡಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ಪವಾರ್ ಮಳಿಗೆಗಳ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ.

ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕರ್ನಾಟಕದ ಲಕ್ಷಾಂತರ ಭಕ್ತರೂ ಹೋಗುತ್ತಾರೆ. ದೇವಸ್ಥಾನದ ಬಳಿ ಬಹುತೇಕ ಮಳಿಗೆಗಳ ಮೇಲೆ ಕನ್ನಡ ಅಕ್ಷರದ ಬೋರ್ಡ್ ಗಳಿದ್ದು, ಲಕ್ಷ್ಮೀ ದೇವಸ್ಥಾನದ ಬಳಿಯೂ ಶಿವಸೇನೆ ಪುಂಡರು ಪುಂಡಾಟಿಕೆ ಮೆರೆದಿದ್ದಾರೆ. ಶಿವಸೇನೆಯ ಈ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.