ನೀರಿನ ಟ್ಯಾಂಕರ್ ಗೆ ಕ್ರಿಮಿನಾಶಕ ಬಾಟೆಲ್ ಹಾಕಿದ ಕಿಡಿಗೇಡಿಗಳು..!

154
firstsuddi

ವಿಜಯನಗರ : ಕುಡಿಯುವ ನೀರಿನ ಟ್ಯಾಂಕರ್ ಗೆ ಕ್ರಿಮಿನಾಶಕ ಬಾಟೆಲ್ ಹಾಕಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಟ್ಯಾಂಕರ್ ನಿರ್ಮಿಸಲಾಗಿದ್ದು, ಅದರ ಒಳಗೆ ಕಿಡಿಗೇಡಿಗಳು ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಬಾಟಲ್ ನ್ನು ಹಾಕಿದ್ದಾರೆ. ಇಂದು ಬೆಳಗ್ಗೆ ನೀರು ಸರಬರಾಜು ಮಾಡುವ ಸಿಬ್ಬಂದಿ ಟ್ಯಾಂಕರ್ ಮೇಲೇರಿ ಪರಿಶೀಲಿಸಿದಾಗ ನೀರಿನಲ್ಲಿ ಕ್ರಿಮಿನಾಶಕ ಬಾಟೆಲ್ ಬಿದ್ದಿರೋದು ಗೊತ್ತಾಗಿದೆ. ತಕ್ಷಣವೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ನೀರಿನಲ್ಲಿದ್ದ ವಿಷದ ಬಾಟಲ್ ಹೊರತೆಗೆದಿದ್ದಾರೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಇನ್ನು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಸಕ ಕರುಣಾಕರ್ ರೆಡ್ಡಿಯವರು ಸೂಚಿಸಿದ್ದಾರೆ. ಚಿಗಟೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.