ಔಟಾದ ಕೋಪದಲ್ಲಿ ಡಗೌಟ್ ನಲ್ಲಿದ್ದ ಕುರ್ಚಿಯನ್ನು ಹೊಡೆದುರುಳಿಸಿದ ಕೊಹ್ಲಿ..!

145
firstsuddi

ಚೆನ್ನೈ : ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಸಂಯಮ ಕಳೆದುಕೊಂಡು ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದರು.

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 33 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಅವರನ್ನು ಜಾಸನ್ ಹೋಲ್ಡರ್ ಔಟ್ ಮಾಡಿದ್ದರು. ಔಟ್ ಆಗಿದ್ದರಿಂದ ಕೊಹ್ಲಿ ಅಸಮಾಧಾನಗೊಂಡಿದ್ದರು. ಮೈದಾನದಿಂದ ನಿರ್ಗಮಿಸುವಾಗ ಕೋಪದಲ್ಲಿ ಡಗೌಟ್ ನಲ್ಲಿದ್ದ ಕುರ್ಚಿಯನ್ನು ಬ್ಯಾಟ್ ನಿಂದ ಹೊಡೆದುರುಳಿಸಿದ್ದಾರೆ. ಇದು ಇಂಡಿಯನ್ ಪ್ರೀಮಿಯರ್ ಲೀಗ್ ನ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಲೆವೆಲ್ 1 ಅಪರಾಧ 2.2 ಅನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಯ ವಿಚಾರದಲ್ಲಿ ಮ್ಯಾಚ್ ರೆಫೆರಿ ತೀರ್ಮಾನವೇ ಅಂತಿಮವಾಗಿದೆ ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ.