ಟಂಟಂ – ಲಾರಿ ನಡುವೆ ಡಿಕ್ಕಿ ; ಐವರ ದುರ್ಮರಣ…

124
firstsuddi

ಯಾದಗಿರಿ : ಟಂಟಂ ಆಟೋ ಹಾಗೂ ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮದ ಬಳಿ ಸಂಭವಿಸಿದೆ.

ಮೃತರನ್ನು ಅಯ್ಯಮ್ಮ(60), ಕಾಸಿಂ(40), ದೇವಿಂದ್ರಮ್ಮ(70),ಶರಣಮ್ಮ(40), ಭೀಮಾಭಾಯಿ(40) ಎಂದು ಗರುತಿಸಲಾಗಿದೆ. ಇವರೆಲ್ಲರೂ ವಡಗೇರ ತಾಲ್ಲೂಕಿನ ಮುನಮುಟಗಿ ಗ್ರಾಮಸ್ಥರೆಂದು ತಿಳಿದುಬಂದಿದ್ದು, ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.