ಬೆಂಗಳೂರು : ಜನರ ಸಹಕಾರದಿಂದ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ : ಬಸವರಾಜು ಬೊಮ್ಮಾಯಿ.

147
firstsuddi

ಬೆಂಗಳೂರು : ವೀಕೆಂಡ್ ಕರ್ಫ್ಯೂ ಮೊದಲನೇ ದಿನವಾದ ಇಂದು ಯಶಸ್ವಿಯಾಗಿದೆ. ಕಳೆದ ಬಾರಿ ಕೊರೊನಾಗಿಂತ ಈ ಬಾರಿ ಹೆಚ್ಚು ಅಪಾಯಕಾರಿಯಾಗಿದೆ. ಜನರಲ್ಲೂ ಕೂಡ ಅರಿವು ಮೂಡಿದೆ. ಜನರು ಸಹ ವೀಕೆಂಡ್ ಕರ್ಫ್ಯೂ ಗೆ ಸಹಕಾರ ಕೊಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಇವರು 800 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಆಗುತ್ತಿದೆ. ಆಕ್ಸಿಜನ್ ವಿಚಾರವಾಗಿ ನಿನ್ನೆ ಮೂರು ಸಭೆಯನ್ನು ಮಾಡಿದ್ದೇವೆ. ಚೀಫ್ ಸೆಕೆರೆಟರಿ ಆಕ್ಸಿಜನ್ ಉತ್ಪಾದಕರ ಬಳಿ ಮಾತನಾಡಿ ಹೆಚ್ಚುವರಿ ಆಕ್ಸಿಜನ್ ಪಡೆದುಕೊಂಡಿದ್ದೇವೆ. ಇನ್ನೂ ನಮ್ಮ ಪವರ್ ಪ್ಲಾಂಟ್ ನಲ್ಲೂ ಆಕ್ಸಿಜನ್ ಉತ್ಪಾದನೆ ಮಾಡುತ್ತಿದ್ದೇವೆ. ಜನರು ಕೂಡ ನಮ್ಮ ಜವಾಬ್ದಾರಿ ಅರ್ಥಮಾಡಿಕೊಳ್ಳಬೇಕು. ಕಾನೂನು ಕ್ರಮ ಉಲ್ಲಂಘಿಸಿದವರ ವಿದುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಮೀಷನರ್ ಬಳಿ ಮಾತನಾಡಿದ್ದೇನೆ. ಸಾರ್ವಜನಿಕರೂ ಉತ್ತಮ ಸಹಕಾರ ಕೊಟ್ಟಿದ್ದಾರೆ ಎಂದಿದ್ದಾರೆ. ಸೋಮವಾರ ಬೆಳಗ್ಗೆ 11.00 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಮೂರು ಮಹತ್ವದ ವಿಚಾರ ಚರ್ಚೆ ಆಗಲಿದೆ. ವಾರ ಪೂರ್ತಿ ಕರ್ಫ್ಯೂ, ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮತ್ತು ವ್ಯಾಕ್ಸಿನ್ ಉಚಿತವಾಗಿ ನೀಡುವ ಬಗ್ಗೆ ಚರ್ಚೆ ಆಗಲಿದೆ ಎಂದರು.