ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ : ಸಿ.ಟಿ.ರವಿ.

142
firstsuddi

ಚಿಕ್ಕಮಗಳೂರು : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು, ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ, ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಸಂಸದ ತೇಜಸ್ವಿ ಸೂರ್ಯ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕಿಲ್ಲ ಎಂದರೆ ಅದಕ್ಕೆ ಇಂತಹ ಪಾಪಿಗಳೇ ಕಾರಣ. ಅವರ ಬಗ್ಗೆ ಯಾರೂ ಸಮರ್ಥನೆ ಮಾಡಲು ಆಗುವುದಿಲ್ಲ,ಇಂತಹ ಕಠಿಣ ಸಂದರ್ಭದಲ್ಲೂ ದುರ್ಲಾಭ ಪಡೆಯೋ ಪಾಪಿಗಳು, ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗುವುದಿಲ್ಲ. ಮೊದಲು ಮೆಡಿಕಲ್ ಸೀಟ್ ಬ್ಲಾಕ್ ಕೇಳಿದ್ದೆ. ಆದರೆ ಇದೀಗ ಕೋವಿಡ್ ಬೆಡ್ ಬ್ಲಾಕ್ ಮಾಡಿ ಬ್ಲಾಕ್ ಮಾರ್ಕೆಟ್ ಮಾಡುವ ಪಾಪಿಗಳನ್ನು ಈಗಲೇ ಕೇಳಿದ್ದು. ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.