ಕೊರೊನಾ ಸೋಂಕಿಗೆ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರ ಸಹೋದರಿ ಬಲಿ…

321
firstsuddi

ಕಡೂರು : ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರ ಸಹೋದರಿ ವತ್ಸಲ ಕೃಷ್ಣಮೂರ್ತಿ(40) ಕೊರೊನಾ ಸೋಂಕಿನಿಂದ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ.

ಒಂದು ವಾರದ ಹಿಂದೆ ವೇದ ಕೃಷ್ಣಮೂರ್ತಿಯವರ ತಾಯಿ ಕೊರೊನಾ ಸೋಂಕಿಗೆ ಚೆಲುವಾಂಬ(63) ಬಲಿಯಾಗಿದ್ದರು. ಹತ್ತು ದಿನದ ಅಂತರದಲ್ಲಿ ತಾಯಿ ಹಾಗೂ ಸಹೋದರಿ ಇಬ್ಬರನ್ನು ಕಳೆದುಕೊಂಡಿದ್ದು, ಇಂದು ಕಡೂರಿನಲ್ಲಿ ಮೃತ ವತ್ಸಲ ಕೃಷ್ಣಮೂರ್ತಿಯವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.