ತಮಿಳುನಾಡು : ಮೇ 10ರಿಂದ 24ರವರೆಗೆ ಲಾಕ್ ಡೌನ್…

115
firstsuddi

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಎರಡು ವಾರಗಳ ಕಾಲ ಲಾಕ್ ಡೌನ್ ವಿಧಿಸಿದ್ದಾರೆ. ಮೇ 10 ರಿಂದ ಮೇ 24ರವರೆಗೆ ತಮಿಳುನಾಡು ಲಾಕ್ ಆಗಲಿದೆ. ಅಗತ್ಯ ಸೇವೆಗಳ ಹೊರತುಪಡಿಸಿ ಇನ್ನುಳಿದ ಎಲ್ಲ ಚಟುವಟಿಕೆಗಳ ಮೇಲೆ ಸರ್ಕಾರ ನಿರ್ಬಂಧ ಹೇರಿದೆ.

ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಎಂ.ಕೆ.ಸ್ಟಾಲಿನ್ ಅವರು ಎರಡು ವಾರಗಳ ಲಾಕ್ ಡೌನ್ ವಿಧಿಸಿ ಆದೇಶ ಹೊರಡಿಸಿದ್ದಾರೆ.