ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ನ ದರ 995 ರೂಪಾಯಿ 40 ಪೈಸೆ..!

100
firstsuddi

ಹೈದರಾಬಾದ್ : ಕೊರೊನಾ ವಿರುದ್ದ ಹೋರಾಡಲು ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಒಂದು ಡೋಸ್ ಗೆ ಭಾರತದಲ್ಲಿ 995.40 ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ.

ಈಗಾಗಲೇ ಭಾರತಕ್ಕೆ ಆಗಮಿಸಿರುವ ರಷ್ಯಾದ ಈ ಲಸಿಕೆ ಮುಂದಿನ ವಾರದಿಂದ ಮಾರುಕಟ್ಟೆಗೆ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರೆಡ್ಡೀಸ್ ಕಂಪನಿ ಈ ದರವನ್ನು ನಿಗದಿ ಮಾಡಿದ್ದು, ಆಮದು ಮಾಡಿಕೊಂಡ ಸ್ಪುಟ್ನಿಕ್ ಲಸಿಕೆಯನ್ನು ಇಂದು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದ್ದು, ಮೊದಲ ಡೋಸ್ ನೀಡಲಾಗಿದೆ.

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಸ್ಪುಟ್ನಿಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಪ್ರಸ್ತುತ ಭಾರತದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದ್ದು, ಈ ಎರಡು ಲಸಿಕೆಗೆ ಹೋಲಿಸಿದರೆ ಸ್ಪುಟ್ನಿಕ್ ಲಸಿಕೆ ಶೇ.91 ರಷ್ಟು ಪರಿಣಾಮಕಾರಿ ಎನ್ನಲಾಗುತ್ತಿದೆ. ಭಾರತದಲ್ಲಿ ಈ ಲಸಿಕೆ ತಯಾರಾದರೆ ದರ ಮತ್ತಷ್ಟು ಇಳಿಕೆಯಾಗಲಿದೆ.

ಲಸಿಕೆ ದ್ರವ ಮತ್ತು ಪೌಡರ್ ಎರಡೂ ರೂಪದಲ್ಲಿ ಸ್ಪುಟ್ನಿಕ್ ಲಭ್ಯವಿದ್ದು, ದ್ರವ ರೂಪದ ಲಸಿಕೆಯನ್ನು ಮೈನಸ್ 18 ಡಿಗ್ರಿ, ಪೌಡರ್ ರೂಪದ ಲಸಿಕೆಯನ್ನು 2 ಮತ್ತು 8 ಡಿಗ್ರಿಯಲ್ಲಿ ಸಂಗ್ರಹ ಮಾಡಬೇಕಾಗುತ್ತದೆ. ಲಸಿಕೆ ತಗೆದುಕೊಂಡ 3 ವಾರದ ಒಳಗಡೆ ಮತ್ತೊಮ್ಮೆ ಈ ಲಸಿಕೆಯನ್ನು ತೆಗದುಕೊಳ್ಳಬೇಕಾಗುತ್ತದೆ.