ಸಿಎಂ ಬದಲಾವಣೆ ಚಟುವಟಿಕೆ ನಡೀತಿರೋದು ನಿಜ, ಆದರೆ ನಾನು ಕೊರೊನಾ ನಿಯಂತ್ರಣಕ್ಕೆ ತರುವ ಕೆಲಸ ಮಾಡ್ತಿದ್ದೇನೆ : ಆರ್.ಅಶೋಕ್.

106
firstsuddi

ಬೆಂಗಳೂರು : ಸಿಎಂ ಬದಲಾವಣೆ ಚಟುವಟಿಕೆ ನಡೀತಿರೋದು ನಿಜ, ಆದರೆ ನಾನು ಕೊರೊನಾ ನಿಯಂತ್ರಣಕ್ಕೆ ತರುವ ಕೆಲಸ ಮಾಡ್ತಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚಟುವಟಿಕೆ ನಡೆದಿರುವವುದು ಶೇ.100 ನಿಜ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಚಿವರ ಸಭೆ ಕೂಡ ಆಗಿರೋದು ನಿಜ. ಹಲವಾರು ಸಭೆಗಳು ನಡೆಯುತ್ತಿವೆ. ಅದು ನನ್ನ ಗಮನಕ್ಕೆ ಬಂದಿದೆ. ದೆಹಲಿಗೂ ಕೆಲವು ನಾಯಕರು ಹೋಗಿದ್ದಾರೆ. ಆದರೆ ನನ್ನ ಆದ್ಯತೆ ಏನಿದ್ದರೂ ಕೊರೊನಾ ನಿಯಂತ್ರಣ, ಆಕ್ಸಿಜನ್, ಬೆಡ್ ವ್ಯವಸ್ಥೆ ಮಾಡುವುದು, ಕೋವಿಡ್ ಹತೋಟಿಗೆ ತರುವ ಕೆಲಸ ಮಾಡುತ್ತಿದ್ದೇವೆ. ನನ್ನ ಗಮನ ಆ ಕಡೆ ಅಷ್ಟೇ ಎಂದು ಆರ್.ಅಶೋಕ್ ಅವರು ಸ್ಪಷ್ಟಪಡಿಸಿದ್ದಾರೆ.