ಕೋವಿಡ್ ನಿಂದ ಮೃತಪಟ್ಟ ಉದ್ಯೋಗಿಗಳ ಕುಟುಂಬಕ್ಕೆ ಐದು ವರ್ಷದವರೆಗೆ ಸಂಬಳ : ರಿಲಯನ್ಸ್ ಮಹತ್ವದ ನಿರ್ಧಾರ..!

75
firstsuddi

ಮುಂಬೈ : ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದ್ದು, ಕೊರೊನಾದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಉದ್ಯಮ ವಲಯವು ಕೂಡ ಕೆಂಗೆಟ್ಟಿದೆ. ಇಂತಹ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಅವರು ಕೋವಿಡ್ ನಿಂದ ಮೃತಪಟ್ಟ ತನ್ನ ಉದ್ಯೋಗಿಗಳಿಗೆ ಸಹಾಯ ಮಡಲು ಮುಂದಾಗಿದ್ದಾರೆ.

ಸಾವನ್ನಪ್ಪಿದ ಉದ್ಯೋಗಿಯು ತಮ್ಮ ಕೊನೆಯ ಸಂಬಳ ಎಷ್ಟು ಪಡೆಯುತ್ತಿದ್ದರೋ ಅದೇ ಸಂಬಳವನ್ನು ಮುಂದಿನ ಐದು ವರ್ಷದವರೆಗೆ ನೀಡಲಾಗುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದೆ. ಅಲ್ಲದೇ ಸಾವನ್ನಪ್ಪಿದ ಕುಟುಂಬದ ಮಕ್ಕಳು ದೇಶದಲ್ಲಿ ಎಲ್ಲೇ ಓದಿದರೂ ಅವರ ಸಂಪೂರ್ಣ ಶಿಕ್ಷಣವನ್ನು ತಾವೇ ಭರಿಸುವುದಾಗಿ ನಿರ್ಧಾರ ಕೈಗೊಂಡಿದೆ.

ಇನ್ನು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಗೆ ಸೋಂಕು ತಗುಲಿದರೆ ಅವರ ಚಿಕಿತ್ಸೆಗೆ ರಜೆ ಸೇರಿದಂತೆ ಅದರ ಸಂಪೂರ್ಣ ಖರ್ಚು ವೆಚ್ಚವನ್ನು ಕಂಪನಿಯೇ ಭರಿಸಲಿದ್ದು, ಒಂದು ವೇಳೆ ಉದ್ಯೋಗಿ ಕೋವಿಡ್ ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷ ರೂ ನೇರವಾಗಿ ಪಾವತಿಯಾಗಲಿದೆ ಎಂದು ಘೋಷಿಸಿದೆ.