ಮೈಸೂರು ಬಳಿಕ ರಾಜ್ಯ ರಾಜಧಾನಿಯಲ್ಲೂ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆ..!

87
firstsuddi

ಬೆಂಗಳೂರು : ಮೈಸೂರು ಬಳಿಕ ಇದೀಗ ರಾಜ್ಯ ರಾಜಧಾನಿಯಲ್ಲೂ ಕೋವಿಡ್ ರೂಪಾಂತರ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರು ದೃಢಪಡಿಸಿದ್ದಾರೆ.

ಮಹಾಮಾರಿ ಕೋವಿಡ್ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಜೂನ್ 22 ರಂದು ಮೈಸೂರಿನಲ್ಲಿ ಒಂದು ಪ್ರಕರಣ ದೃಢಪಟ್ಟಿದ್ದು, ನಿನ್ನೆ ಬೆಂಗಳೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಸೋಂಕು ಪ್ರಕರಣಗಳ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಅಲ್ಲದೇ ತಮಿಳುನಾಡಿನಿಂದ ಇಲ್ಲಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರಕ್ಕೆ ಕಳುಹಿಸಿದ ಒಂದು ಸ್ಯಾಂಪಲ್ ನಲ್ಲಿ ಕೂಡಾ ಡೆಲ್ಟಾ ಪ್ಲಸ್ ರೂಪಾಂತರ ಕಂಡುಬಂದಿದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.