ಮೈಸೂರು : ಸೋಮವಾರದಿಂದ ಬಸ್ ಸಂಚಾರ ಆರಂಭ…

72
firstsuddi

ಮೈಸೂರು : ಜಿಲ್ಲೆಯಲ್ಲಿ ಸೋಮವಾರದಿಂದ ಬಸ್ ಸಂಚಾರ ಆರಂಭವಾಗಲಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನಲೆ ಈ ಆದೇಶ ಹೊರಡಿಸಲಾಗಿದೆ.

ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲ ಹಿನ್ನೆಲೆ ಸೋಮವಾರ (ಜೂನ್-28) ಬೆಳಗ್ಗೆ 6 ಗಂಟೆಯಿಂದ ಬಸ್ ಸಂಚಾರ ಆರಂಭಿಸಲು ನಿಗಮ ಮುಂದಾಗಿದ್ದು,  ಕೊರೊನಾ ಕಾರಣದಿಂದಾಗಿ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ ಗಳು ಸಂಚಾರ ಮಾಡಲಿವೆ. ಈ ಸಂಬಂಧ ಕೆಎಸ್ ಆರ್ ಟಿಸಿ ಸಂಚಾರ ವ್ಯವಸ್ಥಾಪಕರಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.