ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸಹೋದರನಿಂದ ವೃದ್ಧನ ಮೇಲೆ ಹಲ್ಲೆ…

106
firstsuddi

ದಾವಣಗೆರೆ/ವಿಜಯನಗರ : ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹೋದರ ಪಿ.ಟಿ ಶಿವಾಜಿನಾಯ್ಕ್ ಕ್ಷುಲ್ಲಕ ಕಾರಣಕ್ಕೆ ವೃದ್ದನೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ನಡೆದಿದೆ.

ಶರಣ ನಾಯ್ಕ್ ಹಲ್ಲೆಗೊಳಗಾದ ವೃದ್ಧ. ಶಿವಾಜಿ ನಾಯ್ಕ್ ಮನೆಯ ಪಕ್ಕದಲ್ಲಿಯೇ ಶರಣ್ ನಾಯ್ಕ್ ವಾಸವಾಗಿದ್ದಾರೆ. ಮನೆ ಜಾಗದ ವಿವಾದದ ಸಲುವಾಗಿ ಜಗಳ ನಡೆದಿದೆ. ಈ ವೇಳೆ ಶಿವಾಜಿ ನಾಯ್ಕ್ ಕಬ್ಬಿಣದ ಹಾರೆಯಿಂದ ಹಲ್ಲೆಗೆ ಯತ್ನ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.

ಸದ್ಯ ಗಾಯಗೊಂಡ ಶರಣ ನಾಯಕ್ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.