ಮಿಸ್-ಸಿ ಸೋಂಕಿಗೆ ಐದು ವರ್ಷದ ಮಗು ಬಲಿ…

67
firstsuddi

ದಾವಣಗೆರೆ : ಕೊರೊನಾ ರೂಪಾಂತರಿ ವೈರಸ್ ಮಿಸ್-ಸಿಗೆ ಐದು ವರ್ಷದ ಮಗು ಬಲಿಯಾಗಿದೆ.

ಮಿಸ್-ಸಿ ಎಂಬ ಮಹಾಮಾರಿ ಸೋಂಕಿಗೆ ಜಿಲ್ಲೆಯಲ್ಲಿ ಮೊದಲ ಮಗು ಬಲಿಯಾಗಿದ್ದು, ಎಸ್.ಎಸ್.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ. ಮಗುವಿನಲ್ಲಿ ಮಿಸ್-ಸಿ ಸೋಂಕು ಪತ್ತೆಯಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಚಿತ್ರದುರ್ಗದಿಂದ ದಾವಣಗೆರೆಗೆ ಕರೆತರಲಾಗಿತ್ತು. ಆದರೆ ಇಂದು ಮುಂಜಾನೆ 3 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಕಳೆದ ಒಂದು ವರ್ಷದಲ್ಲಿ ಹತ್ತು ಮಿಸ್-ಸಿ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಈ ಪೈಕಿ ಸದ್ಯ, ಎರಡು ಸಕ್ರಿಯ ಪ್ರಕರಣಗಳಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾಹಿತಿ ನೀಡಿದ್ದಾರೆ.