ಆಸ್ತಿಗಾಗಿ ಹೆತ್ತ ತಂದೆಯನ್ನೇ ಮನೆಯಿಂದ ಎತ್ತಿ ಹೊರಗೆಸೆದ ಪಾಪಿ ಮಗ!

90
firstsuddi

ರಾಮನಗರ : ಆಸ್ತಿಗಾಗಿ ಹೆತ್ತ ತಂದೆಯನ್ನೇ ಮಗ ಮನೆಯಿಂದ ಎತ್ತಿ ಹೊರಗೆಸೆದಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕೆಎಸ್ ಆರ್ ಟಿಸಿ ಬಸ್ ಚಾಲಕ ಕುಮಾರ್ ಎಂಬಾತ ತನ್ನ ತಂದೆ ತಿಮ್ಮಯ್ಯನನ್ನು ಮನೆಯಿಂದ ಹೊರಗೆಸೆದಿದ್ದಾನೆ. ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಮಗ ಕುಮಾರ್ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ತಂದೆ ತಿಮ್ಮಯ್ಯ ನಿರಾಕರಿಸಿದ್ದಾರಂತೆ. ಇದರಿಂದ ಕೋಪಗೊಂಡ ಕುಮಾರ್ ತಂದೆಯನ್ನು ಮನೆಯಿಂದ ಎತ್ತಿ ಎಸೆದಿದ್ದಾನೆ. ಮಗನ ಈ ಕೌರ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಸದ್ಯ ತಿಮ್ಮಯ್ಯನವರು ಬೇರೆಯವರ ಆಶ್ರಯದಲ್ಲಿ ಇದ್ದಾರೆ.

ಈ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.