ಮುಂಬೈ : ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಮಗನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಮ್ಮ ಪುತ್ರ ಅವ್ಯಾನ್ ಆಜಾದ್ ರೇಖಿ ಹುಟ್ಟಿದ್ದು ಮೇ 14ರಂದು. ಅವಧಿಗೂ ಮುನ್ನವೇ ಜನಿಸಿದ ಮಗುವನ್ನು ನಿಯೋನೇಟಲ್ ಐಸಿಯುನಲ್ಲಿ ನರ್ಸ್ ಗಳು ಹಾಗೂ ವೈದ್ಯರು ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಹಠಾತ್ತಾಗಿ ಮಾಡಲಾದ ಅಪೆನ್ ಡೆಕ್ಟೊಮಿ ಮತ್ತು ಅದರಿಂದ ಉಂಟಾದ ತೀವ್ರ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ನಿಂದ ಜೀವಕ್ಕೆ ಅಪಾಯವಿತ್ತು. ಎಮರ್ಜೆನ್ಸಿ ಸಿ-ಸೆಕ್ಷನ್ ಮುಖಾಂತರ ನನಗೆ ಹೆರಿಗೆ ಮಾಡಲಾಯಿತು ಎಂದು ಬರೆದುಕೊಂಡಿದ್ದಾರೆ.
ದಿಯಾ ಕೊನೆಯ ಬಾರಿಗೆ ಅನುಭವ್ ಸಿನ್ಹಾ ಅವರ “ಥಪ್ಪಡ್” ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಮತ್ತು ಸೈಯಾಮಿ ಖೇರ್ ಜೊತೆಯಾಗಿ ನಟಿಸಿರುವ ತೆಲುಗು ಆಕ್ಷನ್ ಡ್ರಾಮಾ “ವೈಲ್ಡ್ ಡಾಗ್” ನಲ್ಲಿ ದಿಯಾ ಅಭಿನಯಿಸಿದ್ದಾರೆ.










