ರೌಡಿಶೀಟರ್ ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ!

80
firstsuddi

ಬೆಂಗಳೂರು : ಬೆಳ್ಳಂಬೆಳಗ್ಗೆ ನಗರದ 45ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ, ನಗರದ್ಯಾಂತ ಏಕಕಾಲಕ್ಕೆ ಎರಡು ಸಾವಿರಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಇಂದು ಮತ್ತೆ ರೌಡಿಶೀಟರ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಪ್ರಮುಖ ನಟೋರಿಯಸ್ ಗಳಾದ ಸೈಲೆಂಟ್ ಸುನೀಲ್, ಸೈಕಲ್ ರವಿ, ಜೆ.ಬಿ. ನಾರಾಯಣ, ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ನಾಗ ಸೇರಿದಂತೆ ರೌಡಿಗಳ ಸಹಚರರು ಹಾಗೂ 45ಕ್ಕೂ ಹೆಚ್ಚು ರೌಡಿಶೀಟರ್ ನಿವಾಸಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ನಗದು, ಮಾರಕಾಸ್ತ್ರಗಳು, ಡ್ರ್ಯಾಗರ್ ಗಳು, ಆಸ್ತಿ ಪತ್ರಗಳು, ದೊಡ್ಡ ಮಟ್ಟದ ಡೀಲ್ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸರು ದಾಳಿ ಮುಂದುವರಿಸಿದ್ದಾರೆ.