ಜೆಡಿಎಸ್ ಶಾಸಕರಿಂದ ಕೆಆರ್ ಎಸ್ ಡ್ಯಾಂಗೆ ದೃಷ್ಟಿ ನಿವಾರಣಾ ಪೂಜೆ…

118
firstsuddi

ಮಂಡ್ಯ : ಇಂದು ಕೆಆರ್ ಎಸ್ ನಲ್ಲಿ ಜೆಡಿಎಸ್ ಶಾಸಕರು ದೃಷ್ಟಿ ನಿವಾರಣಾ ಪೂಜೆಯನ್ನು ಆಯೋಜಿಸಿದ್ದಾರೆ. ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ದೃಷ್ಟಿ ನಿವಾರಣಾ ಪೂಜೆ ಆರಂಭವಾಗಲಿದೆ. ಹೋಮ, ಹವನಗಳ ಮೂಲಕ ಡ್ಯಾಂಗೆ ತಾಗಿರುವ ದೃಷ್ಟಿ ನಿವಾರಣೆ ಮಾಡಲಾಗುತ್ತದೆ.

ಇತ್ತೀಚೆಗೆ ಸಂಸದೆ ಸುಮಲತಾ ಅವರು ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಕೆಆರ್ ಎಸ್ ನಲ್ಲಿ ಮೆಟ್ಟಿಲುಗಳ ಗೋಡೆ ಕುಸಿತವಾಗಿತ್ತು. ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಡ್ಯಾಂಗೆ ದೃಷ್ಟಿ ತಾಗಿದೆ ಎಂದಿದ್ದರು. ಈ ಹಿನ್ನಲೆ ಜೆಡಿಎಸ್ ಶಾಸಕರು ಇಂದು ಕೆಆರ್ ಎಸ್  ಡ್ಯಾಂನ ಕಾವೇರಿ ಪ್ರತಿಮೆ ಬಳಿ ದೃಷ್ಟಿ ನಿವಾರಣೆ ಪೂಜೆ ಹಮ್ಮಿಕೊಂಡಿದ್ದಾರೆ.