ಮೂಡಿಗೆರೆ : ತುರ್ತು ಸಂದರ್ಭಕ್ಕೆ ಎಸ್ ಡಿಆರ್ ಎಪ್ ತಂಡ ಸನ್ನಧ : ತಹಶೀಲ್ದಾರ್ ನಾಗರಾಜ್.

119
firstsuddi

ಕೊಟ್ಟಿಗೆಹಾರ : ನೆರೆ ಪ್ರವಾಹ ಮುಂತಾದ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಎಸ್‍ಡಿಆರ್‍ಎಪ್ ತಂಡ ಸನ್ನಧವಾಗಿದೆ ಎಂದು ತಹಶೀಲ್ದಾರ್ ನಾಗರಾಜ್ ಹೇಳಿದರು.

ಸುಂಕಸಾಲೆ ಗ್ರಾ.ಪಂ ಸಭಾಂಗಣದಲ್ಲಿ ಎಸ್ ಡಿಆರ್‍ಎಪ್ ತಂಡ ಹಾಗೂ ವಿಪತ್ತು ನಿರ್ವಹಣಾ ಸಮಿತಿಯ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಮಧುಗುಂಡಿ, ದುರ್ಗದಹಳ್ಳಿ, ಸುಂಕಸಾಲೆ, ಮಲೆಮನೆ ಮುಂತಾದ ನೆರೆಪೀಡಿತ ಪ್ರದೇಶಗಳಿಗೆ ಮುಂಜಾಗ್ರತಾ ಕ್ರಮವಾಗಿ ಎಸ್ ಡಿಆರ್‍ಎಪ್ ತಂಡ ಬೇಟಿ ನೀಡಿದ್ದು ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.

ನಂತರ ಎಸ್ ಡಿಆರ್‍ಎಪ್ ತಂಡದೊಂದಿಗೆ ತಹಶೀಲ್ದಾರ್ ನಾಗರಾಜ್ ಅವರು ಮಧುಗುಂಡಿ ಗ್ರಾಮಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಎಸ್‍ಡಿಆರ್‍ಎಪ್ ತಂಡ ಕಮಾಂಡರ್ ಸುನೀಲ್ ಕುಮಾರ್, ರಾಜಸ್ವ ನಿರೀಕ್ಷಕ ಗಿರೀಶ್, ಅಜ್ಜೆಗೌಡ ಮುಂತಾದವರು ಇದ್ದರು.