ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿರುವುದು ಐಟಿ ಅಲ್ಲ, ಇಡಿ…

104
firstsuddi

ಬೆಂಗಳೂರು : ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಐಷರಾಮಿ ಬಂಗಲೆ, ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಜಮೀರ್ ಅಹ್ಮದ್ ಮನೆ ಮೇಲೆ ನಡೆಸಿರುವುದು ಐಟಿ ಅಲ್ಲ, ಅದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ದಾಳಿ ಎಂದು ತಿಳಿದುಬಂದಿದೆ.

ಐಎಂಎ ಪ್ರಕರಣದಲ್ಲಿ ಜಮೀರ್ ಅಹ್ಮದ್ ಹೆಸರು ಬಲವಾಗಿ ಕೇಳಿ ಬಂದಿತ್ತು. ಅಲ್ಲದೇ ಜಮೀರ್ ಮಗಳ ಮದುವೆಗೆ ಹಣ, ಚಿನ್ನ ನೀಡಿದ್ದರ ಬಗ್ಗೆ ಐಎಂಎ ಅವ್ಯವಹಾರ ಪ್ರಕರಣದ ಪ್ರಧಾನ ವಂಚಕ ಮನ್ಸೂರ್ ಎಂಬಾತ ಇಡಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನಲೆ ಜಮೀರ್ ಮನೆ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸದ್ಯ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ರೋಷನ್ ಬೇಗ್ ಜಾರಿ ನಿರ್ದೇಶನಾಲಯದ ಬಂಧನದ ಭೀತಿಯಲ್ಲಿದ್ದಾರೆ.