ಮೊಹರಂ ಆಚರಣೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು…

94
firstsuddi

ರಾಯಚೂರು : ಮೊಹರಾಂ ಹಬ್ಬ ಆಚರಣೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಅಲಾಯಿ ದೇವರನ್ನು ಹೊತ್ತಿದ್ದ ಹಸನಸಾಬ ಮುಲ್ಲಾ (60) ಹಾಗೂ ದೇವರ ದರ್ಶನಕ್ಕೆ ಬಂದಿದ್ದ ಹುಲಿಗೆಮ್ಮ (25) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೊಹರಂ ಹಬ್ಬದ 9ನೇ ದಿನದ ಕತಾಲ್ ರಾತ್ರಿ ಅಲಾಯಿ (ಪೀರ್) ದೇವರ ಭೇಟಿ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.