ಮಂಗಳೂರು : ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಗರದ ಜಪ್ಪು ಮಹಾಕಾಳಿಪಡ್ಪು ಬಳಿ ಇಂದು ಬೆಳಿಗ್ಗೆ ನಡೆದಿದೆ.
ಮೃತ ಮಹಿಳೆಯರನ್ನು ಸ್ಥಳೀಯ ನಿವಾಸಿಗಳಾದ ವಸಂತಿ (50) ಮತ್ತು ಪ್ರೇಮಾ (48) ಎಂದು ಗುರುತಿಸಲಾಗಿದೆ.
ಮೃತ ಮಹಿಳೆಯರು ಬೀಡಿ ಕಾರ್ಮಿಕರಾಗಿದ್ದು ಇವರಿಬ್ಬರು ತಾವು ಕಟ್ಟಿದ ಬೀಡಿಗಳನ್ನು ಬ್ರ್ಯಾಂಚ್ ಗೆ ಕೊಡಲು ಹಳಿಯನ್ನು ದಾಟಿ ಹೋಗುತ್ತಿದ್ದರು. ಆದ್ರೆ ಅದೇ ವೇಳೆ ಮಂಗಳೂರು ಜಂಕ್ಷನ್ ನಿಂದ ಕೇರಳ ಕಡೆಗೆ ಹೋಗುತ್ತಿದ್ದ ರೈಲು ಬಂದಿದ್ದು, ಮಹಿಳೆಯರಿಬ್ಬರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.
ರೈಲ್ವೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.










