ಹುಟ್ಟುಹಬ್ಬದಂದೇ 12ನೇ ಮಹಡಿಯಿಂದ ಬಿದ್ದು ಒಂದು ವರ್ಷದ ಬಾಲಕ ಸಾವು!

102
firstsuddi

ನೋಯ್ಡಾ(ಉತ್ತರ ಪ್ರದೇಶ) : ಹುಟ್ಟುಹಬ್ಬದಂದೇ 12ನೇ ಮಹಡಿಯಿಂದ ಬಿದ್ದು ಒಂದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಪಶ್ಚಿಮ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಸಾವನ್ನಪ್ಪಿರುವ ಮಗುವನ್ನ ರಿವಾನ್ ಎಂದು ಗುರುತಿಸಲಾಗಿದೆ. ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವಿದ್ದ ಕಾರಣ ಮಗುವಿನ ತಂದೆ ಸತ್ಯೇಂದ್ರ ಕುಟುಂಬದ ಸದಸ್ಯರೊಂದಿಗೆ ಮನೆ ಅಲಂಕಾರ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ವೇಳೆ ಮಗು ರಿವಾನ್ 12ನೇ ಮಹಡಿಯಲ್ಲಿನ ಆಟದ ಪ್ರದೇಶದಲ್ಲಿ ಆಟವಾಡುತ್ತಿದ್ದಾಗ ಆಯಾತಪ್ಪಿ ಬಿದ್ದು, ಸಾವನ್ನಪ್ಪಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.