ಎಚ್ಚರ ಮಹಿಳೆಯರೇ.! ಮದುವೆಯಾಗೋದೇ ಈ ಮಂತ್ರವಾದಿಯ ಖಯಾಲಿ – ದೇವರ ಹೆಸರಲ್ಲಿ ಮೋಸ…

78
firstsuddi

ಚಿಕ್ಕಮಗಳೂರು : ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಮಂತ್ರವಾದಿಯೋರ್ವ ಮಹಿಳೆಯರು, ಯುವತಿಯರ ಬಾಳಲ್ಲಿ ಜಂಪಿಂಗ್ ಸ್ಟಾರ್ ಆಗಿ 35ರ ಆಸುಪಾಸಿಗೆ ಮೂರು ಮದುವೆಯಾಗಿ ವಿಷಯ ಹೊರಬರುತ್ತಿದ್ದಂತೆ ನಾಲ್ಕನೇಯವಳನ್ನ ಕರೆದುಕೊಂಡು ಜೂಟ್ ಆಗಿರುವ ಘಟನೆ ಕಳಸ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ನಿವಾಸಿ ಯೂಸಫ್ ಹೈದರ್ ಮಂತ್ರವಾದಿಯ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಯುವತಿಯರು, ಮಹಿಳೆಯರ ಜೊತೆ ಪ್ರೀತಿಯ ನಾಟಕವಾಡಿ ಮದುವೆಯಾಗುತ್ತಿದ್ದನು. ಬಳಿಕ ಮದುವೆಯಾಗಿ ಆರು ತಿಂಗಳು, ವರ್ಷ ಸಂಸಾರ ಮಾಡಿ ಒಂದು ಮಗುವಾಗುತ್ತಿದ್ದಂತೆ ಆಕೆಯನ್ನ ಬಿಟ್ಟು ಬೇರೆ ಮದುವೆಯಾಗುತ್ತಿದ್ದನು. ಹೀಗೆ ಅಮಾಯಕರನ್ನ ವಂಚಿಸಿ ಮೂರು ಮದುವೆಯಾಗಿದ್ದಾನೆ.

ವಿಷಯ ಮೂರು ಪತ್ನಿಯರಿಗೂ ತಿಳಿಯುತ್ತಿದ್ದಂತೆ ನಾಪತ್ತೆಯಾಗುವಾಗಲೂ ನಾಲ್ಕನೇಯವಳನ್ನ ಕರೆದುಕೊಂಡು ಹೋಗಿದ್ದಾನೆ. ಇದೀಗ, ಈತನಿಂದ ಮೋಸ ಹೋದ ಪತ್ನಿಯರು ನ್ಯಾಯಕ್ಕಾಗಿ ಪರಿತಪ್ಪಿಸುತ್ತಿದ್ದಾರೆ.