ಫ್ರಿಡ್ಜ್, ಟಿವಿ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು…

97
firstsuddi

ಬೆಂಗಳೂರು : ಫ್ರಿಡ್ಜ್ , ಟಿವಿ ಇದ್ದವರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು, ಫ್ರಿಡ್ಜ್, ಟಿವಿ ಇರುವ ಬಡವರ ಬಿಪಿಎಲ್ ಕಾರ್ಡ್ ರದ್ದು ಗೊಳಿಸಲಾಗಿದೆ. ಬಿಪಿಎಲ್ ಪಡಿತರು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದ್ದವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿತ್ತು. ಆದರೆ ಇದೀಗ ಫ್ರಿಡ್ಜ್, ಟಿವಿ ಇರುವ ಬಡವರ ಬಿಪಿಎಲ್ ಕಾರ್ಡ್ ರದ್ದು ಗೊಳಿಸಲಾಗಿದೆ. ಸದ್ಯ ಈಗ ಕೆಲವರ ಕಾರ್ಡ್ ರದ್ದುಗೊಳಿಸುತ್ತಿದ್ದು ಜನ ಸಾಮಾನ್ಯರು ಚಿಂತೆ ಮಾಡುವಂತಾಗಿದೆ.

ಈ ಹಿಂದೆ ಉಮೇಶ್ ಕತ್ತಿ ಬೆಳಗಾವಿಯಲ್ಲಿ 5 ಎಕರೆಗಿಂತ ಹೆಚ್ಚಿನ ಜಮೀನು, ಮನೆಯಲ್ಲಿ ಟಿವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುತ್ತದೆ. ಇಂಥವರು ತಮ್ಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಮಾರ್ಚ್ ಅಂತ್ಯದ ವರೆಗೆ ಸಮಯ ಇದೆ ಎಂದು ಘೋಷಿಸಿದ್ದರು.