ಕೆರೆಯಲ್ಲಿ ಮುಳುಗಿ ಯುವತಿ ಸಾವು…

66
firstsuddi

ಮಂಗಳೂರು : ಫಾರ್ಮ್ ಹೌಸ್ ನ ಕೆರೆಯಲ್ಲಿ ಈಜಲು ಹೋಗಿ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲ್ಲೂಕು ಕೇಪು ಗ್ರಾಮದ ವಾರಣಾಸಿ ಎಂಬಲ್ಲಿ ಬಳಿ ಸಂಭವಿಸಿದೆ.

ಮೃತರನ್ನು ಮೈಜಿ ಕೆರೋಲ್ ಫೆರ್ನಾಂಡಿಸ್ (31) ಎಂದು ಗುರುತಿಸಲಾಗಿದೆ. ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಮೈಜಿ ಕೆರೋಲ್ ಫೆರ್ನಾಂಡಿಸ್ ಕೃಷಿ ಅದ್ಯಯನದ ಬಗ್ಗೆ ಆಸಕ್ತಿಯನ್ನು ಹೊಂದಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಪಾರ್ಮ್ ಹೌಸ್ ನಲ್ಲಿ ಅಧ್ಯಯನ ಮಾಡುತ್ತಿದ್ದರು. ನಿನ್ನೆ ಸಂಜೆ ಫಾರ್ಮ್ ಹೌಸ್ ನಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ಮಂಗಳೂರಿನ ಪಾದರ್ ಮುಲ್ಲರ ಆಸ್ವತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.