ಬೆಂಗಳೂರು : ನಾನು ಎಲ್ಲರಿಗಿಂತಲೂ ಹಿರಿಯ. ಹೀಗಾಗಿ ನನ್ನನೂ ನಗರ ಉಸ್ತುವಾರಿಯನ್ನಾಗಿ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿರುವುದಾಗಿ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗೆ ಪೈಪೋಟಿ ವಿಚಾರ ಸಂಬಂಧ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಮುನ್ನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬೆಂಗಳೂರು ನಗರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಈಗಲೂ ಅವರೇ ವಹಿಸಿಕೊಂಡರೂ ತೊಂದರೆ ಇಲ್ಲ. ಆದರೆ ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಯಾರಿಗೆ ಎಷ್ಟು ವರ್ಷ ಅನುಭವವಿದೆ, ಯಾರನ್ನು ಉಸ್ತುವಾರಿ ಮಾಡಬೇಕು ಎಂದು ಅವರಿಗೆ ತಿಳಿದಿದೆ. ನಾನು ಜೆ.ಹೆಚ್ ಪಾಟೇಲರ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದವನು. ಎಲ್ಲರಿಗಿಂತ ಜಾಸ್ತಿ ಅರ್ಹತೆ ಹೊಂದಿದ್ದೇನೆ. ಹಾಗಾಗಿ ನನ್ನನ್ನು ಬೆಂಗಳೂರು ಉಸ್ತುವಾರಿಯನ್ನಾಗಿ ಮಾಡಿ ಎಂದು ಕೇಳಿದ್ದೇನೆ ಎಂದಿದ್ದಾರೆ.
ನಾನು 40 ವರ್ಷ ರಾಜಕಾರಣದಲ್ಲಿ ಅನುಭವ ಹೊಂದಿದ್ದೇನೆ. ಅಶೋಕ್ ಎಂಎಲ್ಎ ಆಗಿದ್ದಾಗ ನಾನು ಮಂತ್ರಿಯಾಗಿದ್ದೆ. ಹಾಗಂತ ನನಗೆ ದುರಂಹಕಾರ ಇಲ್ಲ. ನನಗೆ ನನ್ನ ಪಕ್ಷ ಮುಖ್ಯ ಎಂದು ನುಡಿದಿದ್ದಾರೆ. ನಮ್ಮ ಬೆಂಗಳೂರು ನಗರದಲ್ಲಿರುವವರು ಉಸ್ತುವಾರಿ ಸಚಿವರಾಗುವುದಕ್ಕೆ ಯಡಿಯೂರಪ್ಪ ಅವರು ಈ ಹಿಂದೆ ಹೊಸ ಪೀಠಿಕೆ ಹಾಕಿ ಇಟ್ಟುಕೊಂಡಿದ್ದರು. ಇವರಿಗೂ ನಾನು ಅದನ್ನೇ ಹೇಳಿದ್ದೇನೆ. ಇಲ್ಲ ಯಾರಿಗಾದರೂ ಕೊಟ್ಟರೂ ಯಾವುದೇ ತೊಂದರೆ ಇಲ್ಲ. ಆದರೆ ನಾನು ಎಲ್ಲರಿಗಿಂತ ಬೆಂಗಳೂರು ನಗರಕ್ಕೆ ಸೀನಿಯರ್ ಆಗಿದ್ದೇನೆ. ಈಗ ನನಗೆ 70 ವರ್ಷ ಎಲ್ಲರಿಗಿಂತ ಸೀನಿಯರ್ ಆಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಮಾಡಿಲ್ಲ. ಈಗ ಇರುವ ಉಸ್ತುವಾರಿ ಕೊವಿಡ್ ಗಾಗಿ ಮಾಡಿದ್ದು. ಅಶೋಕ್ ಹೇಗೆ ಸಭೆ ನಡೆಸ್ತಾರೆಂದು ಸಿಎಂ ಕೇಳಬೇಕು. ಸದ್ಯ ಇದೀಗ ಬೆಂಗಳೂರು ನಗರದ ಉಸ್ತುವಾರಿಯಾಗಿ ಅಶೋಕ್ ಅವರನ್ನು ಮಾಡುತ್ತಾರೋ ಅಥವಾ ಸೋಮಣ್ಣ ಅವರನ್ನು ಮಾಡುತ್ತಾರೋ, ಇಲ್ಲ ಬೇಕಿದ್ದರೆ ಇಬ್ಬರಿಗೂ ಬೆಂಗಳೂರು ಉಸ್ತುವಾರಿಯನ್ನು ವಹಿಸುತ್ತಾರೋ ಅವರಿಗೆ ಬಿಟ್ಟಿದೆ ಎಂದು ಹೇಳಿದ್ದಾರೆ.










