ಕಾರವಾರ : ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟ…

71
firstsuddi

ಕಾರವಾರ : ಕೆಮಿಕಲ್ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಆರೆಬೈಲ್ ಕ್ರಾಸ್ ನ ಇಡಗುಂದಿ ಬಳಿ ನಡೆದಿದೆ.

ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಅಂಕೋಲ ಭಾಗದ ಕಡೆ ತೆರಳುತಿದ್ದ ಟ್ಯಾಂಕರ್ ಘಾಟಿಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಕೆಲಕಾಲ ಬಂದ್ ಮಾಡಲಾಗಿತ್ತು.

ಸಾಕಷ್ಟು ದೂರ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಸದ್ಯ 300 ರಿಂದ 400 ಮೀಟರ್ ದೂರಗಳಷ್ಟು ಸ್ಪೋಟದಿಂದ ಏನಾಗಿದೆ ಎನ್ನುವ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ.