ಹೈದರಾಬಾದ್ : ಮೊಟ್ಟೆ ತಿನ್ನುತ್ತಿದ್ದ ವೇಳೆ, ಅದು ಗಂಟಲಿನಲ್ಲಿ ಸಿಲುಕಿಕೊಂಡು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದೆ.
50 ವರ್ಷದ ನೀಲಮ್ಮ ಮೃತ ಮಹಿಳೆ. ನೀಲಮ್ಮ ಮನೆಯಲ್ಲಿ ಊಟ ಮಾಡಿದ ನಂತರ ಬೇಯಿಸಿದ ಮೊಟ್ಟೆ ತಿನ್ನಲು ಬಾಯಿಯೊಳಗೆ ಹಾಕಿಕೊಂಡಿದ್ದಾಳೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದೆ. ಈ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂದು ತಿಳಿದು ಬಂದಿದೆ.










